ಚುಂಚನಕಟ್ಟೆಯಲ್ಲಿ `ಪ್ರೇಮಪಲ್ಲಕ್ಕಿ` ಗೀತೆ
Posted date: 26 Tue, Nov 2013 – 09:15:43 AM

ನಿಸರ್ಗ ಪಿಕ್ಚರ್ಸ್ ಲಾಂಛನದಲ್ಲಿ  ಎಚ್.ಎನ್.ಗಂಗಾಧರ್ ಅವರು ನಿರ್ಮಿಸುತ್ತಿರುವ ‘ಪ್ರೇಮಪಲ್ಲಕ್ಕಿ‘ ಚಿತ್ರಕ್ಕಾಗಿ ವಿ.ನಾಗೇಂದ್ರಪ್ರಸಾದ್ ಬರೆದಿರುವ ‘ಯಾರೀ ವೈಯ್ಯಾರಿ ವೈಯ್ಯಾರಿ‘ ಎಂಬ ಹಾಡಿನ ಚಿತ್ರೀಕರಣ ಚುಂಚನಕಟ್ಟೆ, ಮಡಿಕೇರಿ, ಕೆ.ಆರ್.ನಗರ ಮುಂತಾದ ಕಡೆ ನಡೆದಿದೆ. ವಿಕ್ರಂ, ಅಶ್ವಿನಿ ಅಭಿನಯಿಸಿದ ಈ ಹಾಡಿಗೆ ರಾಜು ನೃತ್ಯ ನಿರ್ದೇಶನ ಮಾಡಿದ್ದಾರೆ.
     ಸುಧಾಕರ್ ಶೆಟ್ಟಿ ನಿರ್ದೇಶನದ ಈ ಚಿತ್ರಕ್ಕೆ ಆನಂದಪ್ರಿಯ ಹಾಗೂ ಶ್ರೀಕಾಂತ್ ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಬಿ.ನಾಗರಾಜ್ ಛಾಯಾಗ್ರಹಣ, ವಿನಿತ್‌ರಾಜ್ ಮೆನನ್ ಸಂಗೀತ, ಜೋ.ನಿ.ಹರ್ಷ ಸಂಕಲನವಿರುವ ಈ ಚಿತ್ರದ ಹಾಡುಗಳನ್ನು ವಿ.ನಾಗೇಂದ್ರಪ್ರಸಾದ್, ಯೋಗರಾಜ್‌ಭಟ್, ಜಯಂತಕಾಯ್ಕಿಣಿ ಬರೆದಿದ್ದಾರೆ. ವಿಕ್ರಂ, ಅಶ್ವಿನಿ, ಅನಂತನಾಗ್, ಗೀತಾ, ರಮೇಶ್‌ಭಟ್, ಅಚ್ಯುತರಾವ್, ಕಡ್ಡಿ ವಿಶ್ವ, ಕೆಂಪೇಗೌಡ, ವಿನೋದ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed